ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಪ್ಯಾಕೇಜಿಂಗ್
1966ರಲ್ಲಿ ಬೊಂಬಾಯಿಯಲ್ಲಿ ಸ್ಥಾಪಿತವಾದ ಸಂಸ್ಥೆ. ಸಂವೇಷ್ಟನ (ಪ್ಯಾಕೇಜಿಂಗ್) ಕೈಗಾರಿಕೆಗೆ ಅಗತ್ಯವಾದ ಕಚ್ಚಾ ಸಾಮಗ್ರಿಯ ಬಗ್ಗೆ ಸಂಶೋಧನೆ ನಡೆಸುವುದೂ ಸಂವೇಷ್ಟನ ಕ್ಷೇತ್ರದಲ್ಲಿ ಪ್ರಪಂಚದ ನಾನಾ ದೇಶಗಳಲ್ಲಾಗುತ್ತಿರುವ ಪ್ರಗತಿಯಲ್ಲಿ ಭಾರತ ಹಿಂದುಳಿಯದಂತೆ ಕ್ರಮ ಕೈಗೊಳ್ಳುವುದೂ ಸಂವೇಷ್ಟನ ತಂತ್ರದ ಬಗ್ಗೆ ತರಬೇತಿ ಕಾರ್ಯಕ್ರಮಗಳನ್ನೇರ್ಪಡಿಸುವುದೂ ಒಳ್ಳೆಯ ಸಂವೇಷ್ಟನದ ಅಗತ್ಯವನ್ನು ಕುರಿತು ಜನರಲ್ಲಿ ಸರಿಯಾದ ತಿಳಿವಳಿಕೆ ಬೆಳೆಸುವುದೂ ಈ ಸಂಬಂಧವಾಗಿ ಕೈಗಾರಿಕೆಗಳಿಗೆ ಸೂಕ್ತ ಸಲಹೆ ನೀಡುವ ವ್ಯವಸ್ಥೆಯೇರ್ಪಡಿಸುವುದೂ ಈ ಸಂಸ್ಥೆಯ ಮುಖ್ಯ ಉದ್ದೇಶ. ಭಾರತ ಸರ್ಕಾರವೂ, ವ್ಯಾಪಾರ ಹಾಗೂ ಕೈಗಾರಿಕೆ ಸಂಸ್ಥೆಗಳೂ, ವಿಶ್ವವಿದ್ಯಾನಿಲಯಗಳೂ, ಸಂಶೋಧನ ಕೇಂದ್ರಗಳೂ ಈ ಸಂಸ್ಥೆಗೆ ಅಗತ್ಯ ನೆರವು ನೀಡುತ್ತಿರುವುದಲ್ಲದೆ ಇದರ ಕಲಾಪಗಳಲ್ಲಿ ಭಾಗಿಗಳಾಗಿವೆ.										

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ